ಸಂಸ್ಥಾಪಕರ ದಿನಾಚರಣೆ
ಮಕ್ಕಳು ರಾಷ್ಟ್ರದ ಅಮೂಲ್ಯ ಆಸ್ತಿ. ಅವರಿಗೆ ಸೂಕ್ತ ಪೋಷಣೆ, ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಭವಿಷ್ಯದ ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಬೇಕೆಂಬ ಇಚ್ಛೆ ಪರಮಪೂಜ್ಯ ವಿಬುಧೇಶ ತೀರ್ಥ ಸ್ವಾಮೀಜಿರವರಿಗಿತ್ತು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರು. ಇಂದು ಈ ಸಂಸ್ಥೆಗಳು ಬಾನೆತ್ತರಕ್ಕೆ ಬೆಳೆದು ನಿಂತಿವೆ. ಶ್ರೀಗಳು ತೋರಿದ ಮಾರ್ಗದಲ್ಲಿ ಮಕ್ಕಳನ್ನು ಮುನ್ನಡೆಸುತ್ತಿವೆ. ಅಧ್ಯಾತ್ಮ ಸಾಧನೆ, ಸಮಾಜ ಸುಧಾರಣೆ, ಶಿಕ್ಷಣ ಕ್ರಾಂತಿ ಮಾಡಿದ ವಿಬುಧೇಶ ತೀರ್ಥ ಸ್ವಾಮೀಜಿರವರ ಸ್ಮರಣಾರ್ಥ ಪ್ರತಿ ವರ್ಷ ಜುಲೈ ತಿಂಗಳ ಮೊದಲ ಗುರುವಾರದಂದು ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ

